ವೆಬ್‍ಸ್ಫಿಯರ್ ತಂತ್ರಾಂಶ -
	ಪ್ರತಿಯೊಂದು ಸಂಸ್ಥೆಯಲ್ಲಿನ ವ್ಯಾವಹಾರಿಕ ಪರಿಸರವು ಬಹಳ ವೇಗವಾಗಿದ್ದು ಹೆಚ್ಚು ಸಂಕೀರ್ಣಗೊಳ್ಳುತ್ತಾ ಬೆಳೆಯುತ್ತಿದೆ. 21ನೇ ಶತಮಾನದ ಈ ಅತಿ ಬೆಳವಣಿಗೆಯ ಸಂಸ್ಥೆಗಳು ಎಲ್ಲ ಸ್ಪರ್ಧಾತ್ಮಕ ತೊಡಕುಗಳನ್ನು ಮೀರಿ, ಮಾರುಕಟ್ಟೆಯಲ್ಲಿ ನೆಲೆ ಸ್ಥಾಪಿಸಿಕೊಳ್ಳಲು ಅತ್ಯವಶ್ಯವಾಗಿ ಸಂದರ್ಭಾನುಸಾರ ನಮ್ಯವಾಗಿರುವ ಅಥವಾ ಹೊಂದಿಕೊಳ್ಳುವ ಸ್ವಭಾವವನ್ನು ಅಳವಡಿಸಿಕೊಳ್ಳುವುದರ ಜೊತೆಗೆ, ಸಂಸ್ಥೆಯ ಕಾರ್ಯಗಳೆಲ್ಲ ಸಮರ್ಪಕ ಹಾಗೂ ಸ್ಥಿತಿಸ್ಥಾಪಕತ್ವವನ್ನು ಸಾಧಿಸಬೇಕು. ಇಂತಹ ಬೇಡಿಕೆಯ ವ್ಯಾಪಾರೀ ಪ್ರಪಂಚದಲ್ಲಿ ಸಂಸ್ಥೆಯ ಪ್ರಮುಖ ಆದ್ಯತೆಗಳನ್ನು ಗುರುತಿಸುವುದನ್ನು ಪೂರೈಸಿಕೊಳ್ಳಲು ಐಬಿಎಂನ ವೆಬ್‍ಸ್ಫಿಯರ್ ಎಂಬ ಆನ್ವಯಿಕ ಆಧಾರರಚನೆ ಹಾಗೂ ಸಮನ್ವಯ ತಂತ್ರಾಂಶವು (Application infrastructure and integration software) ಸಹಕಾರಿಯಾಗಿದೆ.

ಶೀಘ್ರ ನಾವೀನ್ಯತೆಯ ಸಾಮಥ್ರ್ಯ: ಯಾವುದೇ ಕಾರ್ಯವಿಧಿಯು ಪರಿಸರಕ್ಕೆ ಸುಲಲಿತವಾಗಿ ಹೊಂದುವಂತೆ ಹಾಗೂ ಸಂಸ್ಥೆಯ ಕ್ಷಮತೆಯನ್ನು ವ್ಯಾವಹಾರಿಕವಾಗಿ ವೃದ್ಧಿಸುವಂತೆ ಮಾಡುವ ಸಾಮಥ್ರ್ಯ ಈ ಆನ್ವಯಿಕದಲ್ಲಿದೆ.

ಹೆಚ್ಚಿನ ಅಭಿವೃದ್ಧಿಶೀಲ ಗುಣ: ಸಂಸ್ಥೆಯ ಮುಖ್ಯ ನಿರ್ವಹಣಾ ಶೈಲಿಗೆ ಪೂರಕವಾಗಿರುವ ಸಾಧನಗಳನ್ನು ಹೊಂದಿರುವ ಈ ಆನ್ವಯಿಕವು ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಜನರಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡುವುದರೊಂದಿಗೆ ಮತ್ತು ಸೂಕ್ತ ಮಾರ್ಗದರ್ಶನ ನೀಡುವುದರೊಂದಿಗೆ ಕಾರ್ಮಿಕರ ಉತ್ಸಾಹವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ವ್ಯಾವಹಾರಿಕವಾಗಿ ಅಭಿವೃದ್ಧಿಶೀಲ ಸ್ಥಿತಿಸ್ಥಾಪಕತೆಯ (Resilience) ಸಾಮಥ್ರ್ಯ: ಪ್ರಸ್ತುತ ಅಭಿವೃದ್ಧಿಶೀಲ ಮಾರುಕಟ್ಟೆಯ ಪ್ರಪಂಚದಲ್ಲಿ ಅಂದರೆ 24 x 7 ಗಂಟೆಗಳ ಕಾರ್ಯವನ್ನು ಗಣನೆಗೆ ತೆಗೆದುಕೊಳ್ಳಬಲ್ಲ ವಿಶ್ವಾಸಾರ್ಹ ಹಾಗೂ ಉತ್ತಮ ಫಲಿತಾಂಶ ನೀಡುವ ಆನ್ವಯಿಕ ಆಧಾರರಚನೆಯ ತಂತ್ರಾಂಶವಾಗಿದೆ.

ಹೊಂದುವ ಅಂತರಜಾಲ - ಪರಿಸರಕ್ಕೆ ಪೂರಕವಾದ ನಾವೀನ್ಯತೆ
ಪ್ರಸ್ತುತ ವ್ಯವಹಾರದ ಮಾದರಿಗಳು ಹೊಂದುವ ಅಂತರಜಾಲದ ನೆರವಿಗೆ ಪೂರಕವಾಗಿರುತ್ತವೆ. ವಿವಿಧ ಭಾಗಗಳಿರುವಾಗ, ಒಂದಕ್ಕೊಂದು ಸಮನ್ವಯಗೊಳಿಸಿರುವಂತಹ ಪರಿಸರದ ಅವಶ್ಯ. ಅಲ್ಲದೆ, ಸಂಸ್ಥೆಯಲ್ಲಿ ಈಗಾಗಲೇ ಇರುವ ಅಂತರಜಾಲ ಸಂಪನ್ಮೂಲಗಳನ್ನು ಬಳಸಿಕೊಂಡು ಹೊಸ ಸಾಧ್ಯತೆಗಳನ್ನು ಹಾಗೂ ಹಲವು ಕಾರ್ಯಗಳ ನಡುವೆ ಸಮನ್ವಯತೆಯನ್ನು ಸಾಧಿಸುವ ಮೂಲಕ ಸಂಸ್ಥೆಯ ಕೆಲಸವನ್ನು ಉನ್ನತಮಟ್ಟಕ್ಕೆ ಏರಿಸುವಂತಹ ಪರಿಸರ ಅತ್ಯವಶ್ಯವಾಗಿರುತ್ತದೆ. ಐಬಿಎಂನ ವೆಬ್‍ಸ್ಫಿಯರ್ ತಂತ್ರಾಂಶವು ಅತಿ ತುರ್ತು ಆನ್ವಯಿಕಗಳ ಸಮನ್ವಯತೆಯನ್ನು ಹಾಗೂ ವಿವಿಧ ವ್ಯವಸ್ಥೆಯ ಗಣಕಗಳನ್ನು ಪರಸ್ಪರ ಹೊಂದಿಕೊಳ್ಳುವ ರೀತಿಯಲ್ಲಿ ಸಮಯದ ಪರಿಪಾಲನೆಯಲ್ಲಿ ತೊಡಗಿ ಉತ್ಪಾದನೆಗಳ ಮೌಲ್ಯವೃದ್ಧಿಗೊಳಿಸುವುದಕ್ಕೆ ಹಾಗೂ ಸಂಸ್ಥೆಯ ಸಂಪನ್ಮೂಲಗಳ ಅಭಿವೃದ್ಧಿಗೆ ಶ್ರಮಿಸುವಲ್ಲಿ ಉತ್ತಮ ಸಾಮಥ್ರ್ಯ ಹೊಂದಿದೆ ಎಂದರೆ ತಪ್ಪೇನಿಲ್ಲ. ಸೇವೆಗೆ ಸಿದ್ಧವಾದ ವಾಸ್ತುಕ್ರಮ ಹಾಗೂ ಅಂತರಜಾಲ ಸೇವೆಗಳು, ವ್ಯಾವಹಾರಿಕ ಸಮನ್ವಯತೆ ಹಾಗೂ ಆನ್ವಯಿಕ ವರ್ಗಾವಣೆಯ ಮೂಲಕ ಇದು ವ್ಯಾವಹಾರಿಕ ಸಂಸ್ಥೆಗಳಿಗೆ ಉತ್ತಮ ಸೇವೆ ನೀಡುತ್ತದೆ. 

ಸುಚಲನಾಕೃತಿ ಹಾಗೂ ವ್ಯಾವಹಾರಿಕ ಕಾರ್ಯಗಳನ್ನು ಹಿಗ್ಗಿಸುವುದರ ಮೂಲಕ ಕಾರ್ಮಿಕ ಉತ್ಪತ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಸಾಮಥ್ರ್ಯ:
ವ್ಯಾವಹಾರಿಕವಾಗಿ, ಕಾರ್ಯಕ್ರಮಗಳ ಕ್ಷಮತೆ ಹಾಗೂ ಸೂಕ್ತ ನಿರ್ದೇಶನದ ಮೇರೆಗೆ ಕಾರ್ಮಿಕ ಉತ್ಪತ್ತಿಯ ಅನುಪಾತ ನಿರ್ಧಾರಿತವಾಗುತ್ತದೆ. ವೆಬ್‍ಸ್ಫಿಯರ್ ತಂತ್ರಾಂಶವು ಕಾರ್ಮಿಕರ ನಡುವಿನ ಉತ್ತಮ ಸಂಬಂಧ, ವ್ಯಾವಹಾರಿಕ ಪಾಲುದಾರರು, ಪೂರೈಕೆದಾರರು ಮತ್ತು ಬಳಕೆದಾರರು ಹಾಗೂ ಇವರು ದಿನನಿತ್ಯ ಬಳಸುವ ವ್ಯಾವಹಾರಿಕ ಆನ್ವಯಿಕಗಳ ಕುರಿತು ಮಾಹಿತಿಗಳನ್ನು ಒದಗಿಸುತ್ತದೆ. ಅಲ್ಲದೆ, ಇವರೆಲ್ಲರೂ ಸೂಕ್ತ ಸಮಯದಲ್ಲಿ ಸೂಕ್ತ ಮಾಹಿತಿಯನ್ನು ಅವರಿಗೆ ಬೇಕಾದ ರೀತಿಯಲ್ಲೇ ಪಡೆಯುವಂತೆ ಮಾಡಿ, ವ್ಯಾವಹಾರಿಕ ನಿರ್ಧಾರಗಳು ಹಾಗೂ ಕ್ರಮಗಳನ್ನು ತೀವ್ರಗೊಳಿಸಲು ಸಹಕಾರಿಯಾಗಿದೆ. ಇವೆಲ್ಲವನ್ನೂ ವೆಬ್‍ಸ್ಫಿಯರ್ ತಂತ್ರಾಂಶವು ನಿರ್ವಹಿಸುತ್ತದೆ. 

ಪೋರ್ಟಲ್ ತಂತ್ರಾಂಶದೊಂದಿಗೆ ಸಂಸ್ಥೆಯು ತನ್ನ ವ್ಯಾವಹಾರಿಕ ಕಾರ್ಯಗಳನ್ನು ವೃದ್ಧಿಸಿ ತನ್ನ ಆನ್ವಯಿಕ ಹಾಗೂ ಮಾಹಿತಿಗಳ ಕುರಿತು ಹೊಸ ಬಳಕೆದಾರರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬಹುದು. 

ಐ.ಬಿ.ಎಂ ವರ್ಕ್‍ಪ್ಲೇಸ್ ತಂತ್ರಾಂಶದ ಬಳಕೆಯಿಂದ ಪರಿಹಾರ ನಿರ್ದೇಶನಗಳ ಮೂಲಕ ವ್ಯಾವಹಾರಿಕ ಆನ್ವಯಿಕಗಳ ಕುರಿತು ಜನರೊಡನೆ ಸಂಪರ್ಕ ಸಾಧಿಸಿ, ಮಾತುಕತೆ ನಡೆಸಬಹುದು; ಇದರ ಮೂಲಕ ವಿಚಾರ ವಿನಿಮಯ ಸಾಧ್ಯವಾಗುತ್ತದೆ. ಅಲ್ಲದೆ, ವಿವಿಧ ವ್ಯಾವಹಾರಿಕ ಸಂಸ್ಥೆಗಳೊಂದಿಗೆ ಸಂಪರ್ಕವನ್ನೂ, ಸಂಬಂಧವನ್ನೂ ಸಾಧಿಸಬಹುದಾಗಿದೆ. 
ಪ್ರಾಡಕ್ಟ್ ಇನ್ಫರ್‍ಮೇಷನ್ ಮ್ಯಾನೇಜ್‍ಮೆಂಟ್ ತಂತ್ರಾಂಶದ ಸಹಾಯದಿಂದ ವಸ್ತುವೊಂದರ ಕುರಿತು ಸಮಗ್ರವಾದ ಮಾಹಿತಿಗಳನ್ನು ಒಮ್ಮೆಲೆ ಸಂಗ್ರಹಿಸಬಹುದು. ಮೌಲ್ಯಕ್ಕೆ ಸಂಬಂಧಿಸಿದಂತೆ ಇದು ಸಮನ್ವಯ ಸಾಧನವೇ ಆಗಿದೆ ಎಂಬುದರಲ್ಲಿ ಸಂಶಯವಿಲ್ಲ. 

ಕಾಮರ್ಸ್ ತಂತ್ರಾಂಶವು ಸಂಸ್ಥೆಯ ವೃದ್ಧಿಗೆ ಚಾಲನೆ ನೀಡುವುದರಲ್ಲಿ ಹಾಗೂ ಅಂತರಜಾಲದ ನೆರವಿನ ಮಾರುಕಟ್ಟೆಯ ಮಾರಾಟ ಹಾಗೂ ಕೊಳ್ಳುವ ಕಾರ್ಯವನ್ನು ಬಹುರೂಪದಲ್ಲಿ ಸಮನ್ವಯಗೊಳಿಸಲು ಸಹಕಾರಿಯಾಗಿದೆ.

ಮೊಬೈಲ್ ಹಾಗೂ ಸ್ಪೀಚ್ ಪರಿಹಾರಗಳ ನೆರವಿನಿಂದ ಯಾವುದೇ ಆನ್ವಯಿಕ ಹಾಗೂ ಹಲವಾರು ಮಾಹಿತಿಗಳ ಶೀಘ್ರ ಹಾಗೂ ತೀವ್ರಗತಿಯ ವಿನಿಮಯ ಯಾವುದೇ ಸಮಯದಲ್ಲಿ ಹೊಸ ಬಳಕೆದಾರನಿಗೆ ಸಾಧ್ಯವಾಗುತ್ತದೆ. 

ನಂಬುಗೆಯ, ಉತ್ತಮ ಫಲಿತಾಂಶವನ್ನು ನೀಡಬಲ್ಲ ಆನ್ವಯಿಕ ಆಧಾರರಚನಾ ತಂತ್ರಾಂಶದಿಂದ ಅಭಿವೃದ್ಧಿಶೀಲ ವ್ಯವಹಾರ ಸ್ಥಿತಿಸ್ಥಾಪಕತ್ವದ ಸಾಮಥ್ರ್ಯ:
ಬೆಳವಣಿಗೆಯ ಉದ್ಯಮದಲ್ಲಿ ಅನುಕೂಲವಾಗುವಂತೆ ಪೂರಕವಾದ ಅಪ್ಲಿಕೇಷನ್ ಅಂಡ್ ಟ್ರಾನ್ಸಾಕ್ಷನ್ ಇನ್ಫ್ರಾಸ್ಟ್ರಕ್ಚರ್ ತಂತ್ರಾಂಶವನ್ನು ಒದಗಿಸುವ ಮೂಲಕ ಅಂತರಜಾಲ ಸಂಬಂಧಿತ ಆಧಾರರಚನೆಯನ್ನು ನಿರ್ಧರಿಸುವಲ್ಲಿ ಸಹಕಾರಿಯಾದ ಅತಿ-ವೇಗದ ಪರಿಸರವನ್ನು ಸೃಷ್ಟಿಸಲು ವೆಬ್‍ಸ್ಫಿಯರ್ ಸಹಕಾರಿಯಾಗುತ್ತದೆ. 

ವೆಬ್‍ಲಾಜಿಕ್
ವೆಬ್‍ಲಾಜಿಕ್ ತಂತ್ರಾಂಶವು ಬಿಇಎ ಸಿಸ್ಟಮ್ಸ್‍ನ ಇ-ಕಾಮರ್ಸ್ ವಿಭಾಗದಲ್ಲೇ ಒಂದು ದಿಟ್ಟ ಹೆಜ್ಜೆ. ಐಬಿಎಂನ ವೆಬ್‍ಸ್ಫಿಯರ್‍ಗೆ  ಸರಿಸಾಟಿಯಾಗಿ ನಿಲ್ಲಬಲ್ಲ ಈ ತಂತ್ರಾಂಶವು 2002ರ ಮಾರ್ಚ್‍ನಲ್ಲಿ ಹುಟ್ಟಿತು. ಇದರಿಂದ ಸುಲಭವಾಗಿ ಅಂತರಜಾಲ ಸೇವೆಗಳ ಆನ್ವಯಿಕಗಳನ್ನು ತಯಾರಿಸಬಹುದಾಗಿದೆ. 2003ರ ಮೊದಲಿನಲ್ಲೇ ತಂತ್ರಾಂಶದ 2ನೆಯ ಆವೃತ್ತಿಯನ್ನು ಬಿಡುಗಡೆಗೊಳಿಸುವ ಸೂಚನೆಯಿತ್ತು. ಸರ್ವರ್ ಸಂಬಂಧಿತ ತಂತ್ರಾಂಶಗಳಲ್ಲೆಲ್ಲ ವೆಬ್‍ಲಾಜಿಕ್ ಹೆಚ್ಚು ಸಾಮಥ್ರ್ಯ ಉಳ್ಳದ್ದಾಗಿದ್ದು, ಈಗಷ್ಟೇ ಈ ತಂತ್ರಾಂಶ ವಿಭಾಗವು ಎಚ್‍ಪಿ ಸಂಸ್ಥೆಯೊಂದಿಗೆ ಒಂದಾಗಲು ಮುಂದೆ ಬಂದಿರುವುದು ಸಂತಸದ ಸಂಗತಿಯಾಗಿದೆ. ವೆಬ್‍ಸ್ಫಿಯರ್‍ನಂತೆಯೇ ಕಾರ್ಯನಿರ್ವಹಿಸುವ ವೆಬ್‍ಲಾಜಿಕ್‍ಗೆ ಹಣೆಪಟ್ಟಿ ಮಾತ್ರ ಬದಲಾಗಿದೆ ಎಂದರೂ ತಪ್ಪಾಗದು.									
(ಜಿ. ಬಾಲಸುಬ್ರಹ್ಮಣ್ಯ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ